ರೈಲ್ವೆ ಬ್ರಿಡ್ಜ್ ಪುಸ್ಸಿಂಗ್ ಬಾಕ್ಸ್ ಕಾಮಗಾರಿ ನಿಲ್ಲಿಸಲು ರೈತರ ಪ್ರತಿಭಟನೆ - vijayapura district news
🎬 Watch Now: Feature Video
ವಿಜಯಪುರ: ಕಲಗುರ್ಕಿ ಬಳಿ ನಡೆದಿರುವ ರೈಲ್ವೆ ಬ್ರಿಡ್ಜ್ ಪುಸ್ಸಿಂಗ್ ಬಾಕ್ಸ್ ಕಾಮಗಾರಿ ನಿಲ್ಲಿಸಿ ಮನಗೂಳಿ ಶಾಖಾ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘಟನೆಯ ನೇತೃತ್ವದಲ್ಲಿ ನಗರದ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಇದಕ್ಕೆ ರೈತರು ಜಗ್ಗದಿದ್ದಾಗ ಬೇಡಿಕೆ ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.