ಕಬ್ಬು ಹೇರಿದ್ದ ಆರು ಟ್ರಾಲಿ ಎಳೆಯಿತು ಒಂದೇ ಟ್ರ್ಯಾಕ್ಟರ್.. ಭಲೇ ಬಹದ್ದೂರ್!! - ಟ್ರ್ಯಾಕ್ಟರ್ ಇಂಜಿನ್ ಅನ್ನು ಬಳಸಿ ಆರು ಟ್ರಾಲಿಗಳಲ್ಲಿ ಕಬ್ಬು ಸಾಗಾಟ
🎬 Watch Now: Feature Video
ಚಿಕ್ಕೋಡಿ:ಒಂದು ಟ್ರ್ಯಾಕ್ಟರ್ನಿಂದ ಬರೋಬ್ಬರಿ ಆರು ಟ್ರಾಲಿಗಳಲ್ಲಿ ಕಬ್ಬು ಸಾಗಾಣಿಕೆ ಮಾಡುವ ಮೂಲಕ ಜಿಲ್ಲೆಯ ಮೂಡಲಗಿ ತಾಲೂಕಿನ ಪಟಗುಂದಿಯಲ್ಲಿ ರೈತನೊಬ್ಬ ಹೊಸ ಸಾಧನೆ ಮಾಡಿದ್ದಾರೆ. ಒಂದು ಟ್ರ್ಯಾಕ್ಟರ್ ಇಂಜಿನ್‌ನ ಬಳಸಿ ಆರು ಟ್ರಾಲಿಗಳಲ್ಲಿ ಕಬ್ಬು ಸಾಗಾಟ ಮಾಡಿದ್ದಾರೆ. ಸುಮಾರು 8 ರಿಂದ 10 ಕಿ.ಮೀ ನಷ್ಟು ದೂರ ಸಾಗಿ ದಾಖಲೆ ಮಾಡಿದ್ದಾರೆ. ಈತನ ಸಾಹಸ ಯಾವುದೇ ಲಿಮ್ಕಾ, ಗಿನ್ನಿಸ್ಗಳಲ್ಲಿ ದಾಖಲಾಗದಿದ್ದರೂ ಅನ್ನದಾತನ ಮನದಾಳದಲ್ಲಿ ಅಚ್ಚಳಿಯದೇ ಉಳಿಯುವ ಸಾಹಸ ಇದಾಗಿದೆ..