ದಸರೆ ಮುಗಿಸಿ ಮರಳಿ ಕಾಡಿಗೆ ಹೊರಟ ಗಜಪಡೆ: ಸಾಂಪ್ರದಾಯಿಕ ಬೀಳ್ಕೊಡುಗೆ - ಆನೆ ಮಾವುತ
🎬 Watch Now: Feature Video
ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಗಜಪಡೆಯನ್ನು ಅರಮನೆ ಆವರಣದಲ್ಲಿ ಬಹಳ ಸರಳವಾಗಿ ಬೀಳ್ಕೊಡಲಾಯಿತು. ಆದರೆ ಈ ಕಾರ್ಯಕ್ರಮಕ್ಕೆ ಯಾವುದೇ ಜನಪ್ರತಿನಿಧಿಗಳು ಭಾಗವಹಿಸಿರಲಿಲ್ಲ. ಆನೆಗಳ ಜೊತೆ ಬಂದಿದ್ದ ಆನೆ ಮಾವುತರಿಗೆ ತಲಾ 10,000 ರೂ. ಹಣ ನೀಡಲಾಯಿತು. ದಸರಾ ಮುಗಿಸಿ ಮರಳಿ ಕಾಡಿಗೆ ಹೊರಡುವ ಗಜಪಡೆಯನ್ನು ಬೀಳ್ಕೊಡಲು ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.