ಗಡಿಕೇಶ್ವರ ಗ್ರಾಮದಲ್ಲಿ ಭೂ ಕಂಪನದ ಅನುಭವ: ಜನರಲ್ಲಿ ಹೆಚ್ಚಿದ ಆತಂಕ - earthquake
🎬 Watch Now: Feature Video
ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಮತ್ತೆ ಭೂಮಿಯಿಂದ ಭಾರಿ ಸದ್ದು ಕೇಳಿ ಬಂದಿದ್ದು, ಭೂ ಕಂಪನದ ಅನುಭವವಾಗಿದೆ. ನಸುಕಿನ ಜಾವ 3.50ಕ್ಕೆ ಮತ್ತು 4 ಗಂಟೆಗೆ ಸುಮಾರಿಗೆ ಸದ್ದು ಕೇಳಿ ಬಂದಿದೆ ಎನ್ನಲಾಗ್ತಿದೆ. ಭೂ ಕಂಪನದ ಅನುಭವವಾದ ಹಿನ್ನೆಲೆ ಜನರು ಮನೆಯಿಂದ ಹೊರ ಬಂದು ನಿಂತಿದ್ದಾರೆ. ಈ ಮುಂಚೆಯೂ ಹಲವು ಬಾರಿ ಇದೇ ರೀತಿಯ ಸದ್ದು ಹಾಗೂ ಭೂ ಕಂಪನದ ಅನುಭವವಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.
Last Updated : Jan 21, 2021, 1:14 PM IST