ಇದಲ್ವಾ ನೀಯತ್ತಂದ್ರೆ... ಪಾದಯಾತ್ರೆಯಲ್ಲಿ ಶಾಸಕರ ಜೊತೆ 140 ಕಿ.ಮೀ. ನಡೆದ ನಾಯಿ - ಪ್ರತಿಭಟನೆಗೆ ಶ್ವಾನ ಸಾಥ್
🎬 Watch Now: Feature Video

ಬೆಳಗಾವಿ: ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ಬಾಗಲಕೋಟೆಯಿಂದ ಬೆಳಗಾವಿವರೆಗೆ ಪಾದಯಾತ್ರೆ ಮಾಡಿದ ಶಾಸಕ ಆನಂದ ನ್ಯಾಮಗೌಡ ಅವರ ತಂಡದ ಜೊತೆ ಶ್ವಾನವೊಂದು ಹೆಜ್ಜೆ ಹಾಕಿದೆ. ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡರ್ ನೇತೃತ್ವದಲ್ಲಿ ಸೆ. 21 ರಂದು ಬಾಗಲಕೋಟೆ ಇಂದ ಬೆಳಗಾವಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಇವರ ಜೊತೆ ಒಂದು ಶ್ವಾನ ಸುಮಾರು 140 ಕಿ.ಮೀಟರ್ ಪಾದಯಾತ್ರೆ ಮಾಡುತ್ತಾ ಪ್ರತಿಭಟನೆಗೆ ಸಾಥ್ ನೀಡಿದೆ.