ಸಂಸ್ಕಾರ ಸ್ಕೂಲ್ ವತಿಯಿಂದ ವೈದ್ಯರು, ಪತ್ರಕರ್ತರಿಗೆ ಎನರ್ಜಿ ಡ್ರಿಂಕ್ ಕಿಟ್ ವಿತರಣೆ - Hubli Chittaguppi Hospital
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8664692-930-8664692-1599130278102.jpg)
ಹುಬ್ಬಳ್ಳಿ: ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಕೊರೊನಾ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಪತ್ರಕರ್ತರಿಗೆ ಸಂಸ್ಕಾರ ಇಂಗ್ಲಿಷ್ ಮೀಡಿಯಂ ಸ್ಕೂಲ್ ವತಿಯಿಂದ ಎನರ್ಜಿ ಡ್ರಿಂಕ್ ಕಿಟ್ ವಿತರಿಸಲಾಯಿತು. ಬಳಿಕ ಮಾತನಾಡಿದ ಸಂಸ್ಕಾರ್ ಸ್ಕೂಲ್ನ ಖಜಾಂಚಿ ಉಜ್ವಲ್ ಸಿಂಗ್, ಕೊರೊನಾ ಸಂದರ್ಭದಲ್ಲಿ ವೈದ್ಯರು ಹಾಗೂ ಪತ್ರಕರ್ತರು ನಿರಂತರವಾಗಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಎನರ್ಜಿ ಡ್ರಿಂಕ್ ಕಿಟ್ ವಿತರಣೆ ಮಾಡಿರುವುದಾಗಿ ಹೇಳಿದರು.