ಅರ್ಜುನನಾಗಿ ಬಂದಿದ್ದೆ, ಈಗ ಬಿಜೆಪಿ ಗೆಲುವಿಗಾಗಿ ಸಾರಥಿಯಾಗುವೆ: ಅನರ್ಹ ಶಾಸಕ ಆರ್.ಶಂಕರ್​ - ಬಿಜೆಪಿ ಗೆಲುವಿಗಾಗಿ ಸಾರಥಿಯಾಗುವೆ ಎಂದ ಅನರ್ಹ ಶಾಸಕ ಆರ್.ಶಂಕರ್​

🎬 Watch Now: Feature Video

thumbnail

By

Published : Nov 18, 2019, 2:50 PM IST

ರಾಣೆಬೆನ್ನೂರು: ಬಿಜೆಪಿ ಅಭ್ಯರ್ಥಿ ಅರುಣ್​​ ಕುಮಾರ್ ಪೂಜಾರ ಗೆಲುವಿಗಾಗಿ ಸಾರಥಿಯಾಗಿ ಕೆಲಸ ಮಾಡುವೆ ಎಂದು ಅನರ್ಹ ಶಾಸಕ ಆರ್.ಶಂಕರ್​ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಅರುಣ್​​ ಕುಮಾರ್ ಪೂಜಾರ ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಆರ್.ಶಂಕರ್,​ ಮೊದಲು ನಾನು ರಾಣೆಬೆನ್ನೂರು ಕ್ಷೇತ್ರಕ್ಕೆ ಅರ್ಜುನನಾಗಿ ಬಂದಿದ್ದೆ, ಈಗ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಸಾರಥಿಯಾಗಿ ಕೃಷ್ಣನ ಪಾತ್ರವನ್ನ ನಿರ್ವಹಿಸುತ್ತೇನೆ ಎಂದರು. ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೆ ಹೊರತು ಕದನದಿಂದ ಹಿಂದಕ್ಕೆ ಸರಿದಿಲ್ಲ. ಸಿಎಂ ಯಡಿಯೂರಪ್ಪ ಅವರು ನನ್ನನ್ನ ಎಂಎಲ್​​ಸಿ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.