ಬಾದಾಮಿ: ಶಿಲಾಯುಗದ ಜನತೆ ಕಲ್ಲಿನ ಆಯುಧ ತಯಾರು ಮಾಡುತ್ತಿದ್ದ ಕಾರ್ಖಾನೆ ಪತ್ತೆ - badam latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10319179-thumbnail-3x2-bgk.jpg)
ಬಾಗಲಕೋಟೆ: ಚಾಲುಕ್ಯರ ಕಾಲದ ಸ್ಮಾರಕಗಳಿರುವ ಬಾದಾಮಿ ತಾಲೂಕಿನಲ್ಲಿ ಶಿಲಾಯುಗದ ಜನತೆ ಕಲ್ಲಿನ ಆಯುಧ ತಯಾರು ಮಾಡುತ್ತಿದ್ದ ಕಾರ್ಖಾನೆ ಇತ್ತು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಪ್ರಾಗೈತಿಹಾಸಿಕ ಶಾಖೆಯ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ. ಬಾದಾಮಿ ತಾಲೂಕಿನ ತಮ್ಮಿನಾಳ ಹಾಗೂ ಕಾತರಕಿ ಗ್ರಾಮಗಳ ಹತ್ತಿರ ಇರುವ ರಂಗನಾಥ ದೇವಾಲಯ ಗುಡ್ಡದಲ್ಲಿ, ಸುಮಾರು 2 ಲಕ್ಷ ವರ್ಷಗಳ ಹಿಂದೆ ಶಿಲಾಯುಗದ ಮಾನವರು ಇಲ್ಲಿನ ಗುಡ್ಡದಲ್ಲಿ ಇದ್ದ ಕಲ್ಲಿನಿಂದ ತಮಗೆ ಬೇಕಾದ ಆಯುಧ ತಯಾರು ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ನಾಗಪುರದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಪ್ರಾಗೈತಿಹಾಸಿಕ ಶಾಖೆಯ ಮುಖ್ಯಸ್ಥರಾದ ರಮೇಶ ಮೂಲಿಮನಿ ಹಾಗೂ ತಂಡದವರು ಕಳೆದ ಒಂದು ವಾರದಲ್ಲಿ ಗುಡ್ಡದಲ್ಲಿ ಸುತ್ತಾಡಿ ಸಂಶೋಧನೆ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.