ಜಂಬೂ ಸವಾರಿಗೆ ಸಕಲ ಸಿದ್ದತೆ : ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ - ಮೈಸೂರು ದಸರಾ
🎬 Watch Now: Feature Video
ಮೈಸೂರು : ನಾಳೆ ನಡೆಯಲಿರುವ ಜಂಬೂ ಸವಾರಿಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಅರಮನೆ ಮುಂಭಾಗದಲ್ಲಿ ಪೊಲೀಸರ ನಿಯೋಜನೆ ಕಾರ್ಯ ನಡೆಯಿತು. ಮೈಸೂರು ನಗರದ ವಿವಿಧ ಠಾಣೆಗಳಿಂದ ಬಂದ ನೂರಾರು ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಕರ್ತವ್ಯ ಹಂಚಿ ಸ್ಥಳ ನಿಯೋಜನೆ ಮಾಡಿದರು. ಅಂಬಾ ವಿಲಾಸ ಅರಮನೆಯ ಮುಂಭಾಗದಲ್ಲಿ ಸರಳವಾಗಿ ಈ ಬಾರಿ ಜಂಬೂ ಸವಾರಿ ನಡೆಯಲಿದ್ದು, ತಜ್ಞರ ಸಮಿತಿಯ ನಿರ್ದೇಶನ ಪ್ರಕಾರ ಕೇವಲ 300 ಜನರಿಗೆ ಮಾತ್ರ ಅವಕಾಶ ನಿಡಲಾಗ್ತಿದೆ. ಈ ನಡುವೆ ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಚರ್ಚೆಗೂ ಕಾರಣವಾಗಿದೆ.