ಬೇಟೆಗೆ ಹೊಂಚು ಹಾಕಿದ್ದ ಚಿರತೆಗೆ ಚೆಳ್ಳೆಹಣ್ಣು ತಿನ್ನಿಸಿದ ಜಿಂಕೆ - ವಿಡಿಯೋ ವೈರಲ್ - Deer ran by seeing Cheetha in Mysore video
🎬 Watch Now: Feature Video
ಮೈಸೂರು: ಬೇಟೆಗೆ ಹೊಂಚು ಹಾಕಿ ಕುಳಿತಿದ್ದ ಚಿರತೆ ಕೈಗೆ ಸಿಗದೇ ಚಾಲಾಕಿ ಜಿಂಕೆ ಪರಾರಿಯಾದ ವಿಡಿಯೋ ವೈರಲ್ ಆಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಬೇಟೆಯಾಡಲು ಕಾಯುತ್ತ ಕುಳಿತಿದ್ದ ಚಿರತೆಯನ್ನು ನೋಡಿದ ಜಿಂಕೆ ಕ್ಷಣಾರ್ಧದಲ್ಲೇ ಮಾಯವಾಯಿತು. ಕಾಡಿನ ದಾರಿ ಮಧ್ಯೆ ಜಿಂಕೆ ಬೇಟೆಯಾಡಲು ಕುಳಿತಿದ್ದ ಚಿರತೆ ನಿರಾಸೆಯಿಂದ ಅತ್ತ ಇತ್ತ ನೋಡಿ, ಪೇಚು ಮೋರೆ ಹಾಕಿಕೊಂಡು ತೆರಳಿತು. ಈ ಅಪರೂಪದ ದೃಶ್ಯ ಸಫಾರಿಗರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.