ರಸ್ತೆ ಬದಿಯಲ್ಲಿ ಸತ್ತ ಮೊಸಳೆ ಕಂಡು ಭಯಭೀತರಾದ ಜನ! - ಸುಬ್ರಹ್ಮಣ್ಯ ಸಮೀಪ ರಸ್ತೆ ಬದಿಯಲ್ಲಿ ಸತ್ತ ಮೊಸಳೆ ಕಂಡು ಭಯಭೀತರಾದ ಜನ
🎬 Watch Now: Feature Video
ಕಡಬ: ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ರಸ್ತೆ ಬದಿಯಲ್ಲಿ ಸತ್ತ ಮೊಸಳೆಯೊಂದು ಪತ್ತೆಯಾಗಿ, ನಾಗರಿಕರು ಕೆಲಕಾಲ ಆತಂಕಗೊಂಡ ಘಟನೆ ನಡೆದಿದೆ. ಈ ಹಿಂದಿನಿಂದಲೂ ಕುಮಾರಧಾರ ನದಿಯಲ್ಲಿ ಸುಮಾರು ಮೊಸಳೆಗಳಿವೆ ಎಂಬ ಸುದ್ದಿ ಹಬ್ಬಿತ್ತು. ಹೀಗಾಗಿ ಮೊಸಳೆ ಆಹಾರ ಹುಡುಕಿಕೊಂಡು ಬಂದಿರಬಹುದು ಎಂದು ಹೇಳಲಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವ ಕಾರಣದಿಂದ ಮೊಸಳೆ ಸತ್ತಿದೆ ಎಂಬುದು ತಿಳಿಯಬೇಕಿದೆ.