ಲಾಕ್ಡೌನ್ ಫ್ರೀ ಟೈಂನಲ್ಲಿ ರೈತನಾಗಿ ಬದಲಾದ ಐಪಿಎಸ್ ಅಧಿಕಾರಿ - ಡಿಸಿಪಿ ಚೇತನ್ ಸಿಂಗ್ ರಾಥೋರ್ ಕೈತೋಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6920355-thumbnail-3x2-dcp.jpg)
ಬೆಂಗಳೂರು: ಲಾಕ್ಡೌನ್ ನಡುವೆ ಫ್ರೀಯಾಗಿರುವ ಜನರಿಗೆ ಐಪಿಎಸ್ ಅಧಿಕಾರಿಯೊಬ್ಬರು ಕೃಷಿ ಮಂತ್ರ ಜಪಿಸುವಂತೆ ತಿಳಿ ಹೇಳಿದ್ದಾರೆ. ಲಾಕ್ಡೌನ್ ಕರ್ತವ್ಯ ನಿರ್ವಹಣೆ ಜೊತೆಗೆ ತಮಗೆ ಸಿಗುವ ಕೊಂಚ ಸಮಯದಲ್ಲಿ ತಮ್ಮ ಮನೆ ಗಾರ್ಡನ್ನಲ್ಲಿ ಅವಶ್ಯಕ ತರಕಾರಿಗಳನ್ನು ಬೆಳೆದಿರುವ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಅವರು, ತಮಗೆ ಸಿಗುವ ಅಲ್ಪ ಸಮಯವನ್ನು ವ್ಯರ್ಥ ಮಾಡದೆ ಕೈತೋಟದಲ್ಲಿ ಕೃಷಿ ಕೆಲಸ ಮಾಡಿದ್ದಾರೆ. ಅಲ್ಲದೆ, ಇಂತಹ ಕೆಲಸಗಳ ಮೂಲಕ ಸಮಯದ ಸದುಪಯೋಗ ಮಾಡಿಕೊಳ್ಳಿ ಎಂದು ಜನರಿಗೂ ಸಲಹೆ ನೀಡಿದ್ದಾರೆ ಡಿಸಿಪಿ.