ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಿಧನಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಸಂತಾಪ - Dhoreswamy is a freedom fighter
🎬 Watch Now: Feature Video
ಅಥಣಿ: ರಾಜ್ಯದ ಹಿರಿಯ ಜೀವಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ನಿಧನಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಸಂತಾಪ ಸೂಚಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ನಿಧನದಿಂದಾಗಿ ಸಮಾಜಕ್ಕೆ ತುಂಬಲಾಗದ ನಷ್ಟವಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖರಾಗಿದ್ದರು. ನಿರಂತರ ಹೋರಾಟಗಾರರನ್ನು ನಾವು ಕಳೆದುಕೊಂಡಿದ್ದೇವೆ. ಎಮರ್ಜೆನ್ಸಿ ಕಾಲದಲ್ಲಿ ದಿ. ಇಂದಿರಾಗಾಂಧಿ ಅವರಿಗೆ ಪತ್ರ ಬರೆದು ಆರು ತಿಂಗಳ ಕಾಲ ಜೈಲುವಾಸ ಅನುಭವಿಸಿ ಸಮಾಜಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದು, ಸಮಾಜಕ್ಕೆ ತುಂಬಲಾಗದ ನಷ್ಟ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲೆಂದು ಡಿಸಿಎಂ ಸವದಿ ಸಂತಾಪ ಸೂಚಿಸಿದರು.
Last Updated : May 27, 2021, 9:56 AM IST