ದೆಹಲಿಯಿಂದ ಹುಬ್ಬಳ್ಳಿಗೆ ಬಂದ ಮಗಳು... ತಂದೆಯನ್ನು ಕಂಡು ರೈಲ್ವೆ ನಿಲ್ದಾಣದಲ್ಲಿಯೇ ಕಣ್ಣೀರು - Hubballi Corona case
🎬 Watch Now: Feature Video
ಲಾಕ್ಡೌನ್ ಸಡಿಲಿಕೆಯ ಭಾಗವಾಗಿ ಶ್ರಮಿಕ್ ರೈಲಿನ ಮೂಲಕ ದೆಹಲಿಯಿಂದ ಹಲವು ಕಡೆ ಪ್ರಯಾಣಿಕರು ತಮ್ಮ ತಾಯ್ನಾಡಿಗೆ ತಲುಪುತ್ತಿದ್ದಾರೆ. ಈ ಹಿನ್ನೆಲೆ ಐಎಎಸ್ ಕೋಚಿಂಗ್ಗಾಗಿ ತೆರಳಿದ್ದ ಹುಬ್ಬಳ್ಳಿಯ ಯುವತಿಯೊಬ್ಬರು ಇಂದು ಶ್ರಮಿಕ್ ರೈಲಿನ ಮೂಲಕ ಆಗಮಿಸಿದ್ದು, ರೈಲು ನಿಲ್ದಾಣದಲ್ಲಿ ತನ್ನ ತಂದೆಯನ್ನು ಕಂಡು ಕಣ್ಣೀರಿಟ್ಟರು. ಮುಂದಿನ 14 ದಿನಗಳ ಕಾಲ ಕ್ವಾರಂಟೈನ್ಲ್ಲಿ ಇರಬೇಕಾಗಿರುವ ಹಿನ್ನೆಲೆ ದುಃಖದಿಂದ ಯುವತಿ ಕಣ್ಣೀರು ಹಾಕಿದರು. ಈ ವೇಳೆ ಅವರ ತಂದೆ ಮಗಳಿಗೆ ಸಮಾಧಾನ ಹೇಳಿದರು.