ಚಿಕ್ಕಮಗಳೂರಲ್ಲಿ ದತ್ತ ಜಯಂತಿ ಸಂಭ್ರಮ : ನಗರವೆಲ್ಲ ಕೇಸರಿ ಮಯ - ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ
🎬 Watch Now: Feature Video
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಜಿಲ್ಲೆಯ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ದತ್ತ ಜಯಂತಿ ನಡೆಯುತ್ತಿದೆ. ಈ ಹಿನ್ನೆಲೆ ಸಂಘ ಪರಿವಾರದ ಕಾರ್ಯಕರ್ತರು, ಇಡೀ ನಗರವನ್ನೇ ಕೇಸರಿ ಮಯವಾಗಿಸಿದ್ದಾರೆ. ಪ್ರಮುಖವಾಗಿ ನಗರದ ಹನುಮಂತಪ್ಪ ವೃತ್ತ, ಎನ್‌ಎಂಸಿ ವೃತ್ತ, ಬೋಳರಾಮೇಶ್ವರ ಸರ್ಕಲ್, ಟೌನ್ ಕ್ಯಾಂಟೀನ್ ಸರ್ಕಲ್, ಎಐಟಿ ವೃತ್ತ ಕೇಸರಿ ಬಣ್ಣದಿಂದ ಕಲರ್‌ಫುಲ್ ಮಾಡಿದ್ದಾರೆ. ಈಗಾಗಲೇ 11 ದಿನದ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, ದತ್ತ ಭಕ್ತರು ಮಾಲೆ ಧರಿಸಿದ್ದಾರೆ. ಇಂದು ಅನಸೂಯ ಪೂಜೆ ನಡೆಯಲಿದ್ದು, ಇದರ ಅಂಗವಾಗಿ ಬೆಳಗ್ಗೆ 9.30ಕ್ಕೆ ಮಹಿಳೆಯರಿಂದ ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಕಾಮಧೇನು ಗಣಪತಿ ದೇವಸ್ಥಾನದವರೆಗೆ ಸಂಕೀರ್ತನಾ ಯಾತ್ರೆ ನಡೆಯಲಿದೆ.