ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕಲ್ಪಿಸುವ ಹಾಸನಾಂಬೆ.. ದೇಗುಲದ ಬಾಗಿಲು ತೆರೆಯಲು ಕ್ಷಣಗಣನೆ - ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕಲ್ಪಿಸುವ ಹಾಸನಾಂಬೆ
🎬 Watch Now: Feature Video
ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕಲ್ಪಿಸುವ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದೆ. ಅರಸು ವಂಶಸ್ಥ ನಂಜರಾಜ ಅರಸು ಅವರು ಮಧ್ಯಾಹ್ನ12.45ಕ್ಕೆ ದೇವಾಲಯದ ಮುಂದೆ ಬಾಳೆ ಕಂದನ್ನು ಮೈಸೂರು ಮಹಾರಾಜರು ಕೊಟ್ಟಿರುವ ಕತ್ತಿಯಿಂದ ಕಡಿದಿದ್ದಾರೆ. ಇದೀಗ ಅರ್ಚಕರು ಅರಿಶಿಣ, ಕುಂಕುಮ, ಹಣ್ಣು-ಕಾಯಿಯೊಂದಿಗೆ ದೇವಸ್ಥಾನದ ಬಾಗಿಲು ಪೂಜೆ ನಡೆಸುತ್ತಿದ್ದಾರೆ. ದೇಗುಲದ ಬಾಗಿಲು ತೆರೆದ ನಂತರ ದೇವಾಲಯ ಶುದ್ಧೀಕರಿಸಿ, ಹಾಸನಾಂಬೆಯನ್ನು ಒಡವೆಗಳು ಹಾಗೂ ಸೀರೆಯಿಂದ ಅಲಂಕರಿಸಲಾಗುತ್ತದೆ. ಬಳಿಕ ಭಕ್ತರಿಗೆ ದೇವಿ ದರ್ಶನ ನೀಡಲಿದ್ದಾಳೆ.