ಕಾರವಾರ: ಕೊರೊನಾ ಲಸಿಕೆ ಅಭಿಯಾನಕ್ಕೆ ಡಿಸಿ ಚಾಲನೆ - ಕಾರವಾರ ಕೊರೊನಾ ಲಸಿಕೆ ಅಭಿಯಾನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10261158-thumbnail-3x2-chaiii.jpg)
ಕಾರವಾರ: ನಗರದ ಕ್ರಿಮ್ಸ್ ಆಸ್ಪತ್ರೆಯ ಕೋವಿಡ್ ಲಸಿಕಾ ಕೇಂದ್ರದಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಾ.ಕೆ ಹರೀಶ್ ಕುಮಾರ್ ಚಾಲನೆ ನೀಡಿದರು. ಗ್ರೂಪ್ ಡಿ ನೌಕರ ಬಾಲಚಂದ್ರ ಶಿರೋಡಕರ್‌ಗೆ ಮೊದಲ ಲಸಿಕೆ ನೀಡಲಾಯಿತು. ಕಾರವಾರದಲ್ಲಿಂದು 100 ಮಂದಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ನೊಂದಣಿ ಮಾಡಿಕೊಳ್ಳಲಾಗಿತ್ತು, ಆದರೆ, ಲಸಿಕೆ ಪಡೆಯಲು ಕೇವಲ 48 ಮಂದಿ ಮಾತ್ರ ಆಗಮಿಸಿದ್ದಾರೆ. ಜಿಲ್ಲಾದ್ಯಂತ 11 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಪ್ರಾರಂಭವಾಗಿದೆ.