ಪ್ರವಾಹ ಸಂತ್ರಸ್ತರ ಹಣ ನುಂಗಿದ ಕೊರೊನಾ.. ಮುಂದೇನು ಗತಿ?- ವಿಡಿಯೋ - Corona who swallowed
🎬 Watch Now: Feature Video
ಗದಗ : ಇಲ್ಲಿನ ಹೊಳೆ ಸಾಲಿನ ಪ್ರದೇಶದ ಜನರು ಆದ್ಯಾವ ಪಾಪ ಮಾಡಿದ್ದಾರೋ ಗೊತ್ತಿಲ್ಲ. ಒಂದರ ನಂತರ ಒಂದು ಅವಘಡ ಅವರ ಬದುಕಿಗೆ ಕೊಳ್ಳಿ ಇಡುತ್ತಲೇ ಇದೆ. ಮೊದಲು ಪ್ರವಾಹ ಬಂದು ಅವರಿಗೆ ಆಸರೆಯಾಗಿದ್ದ ಮನೆಗಳನ್ನು ಕಿತ್ತುಕೊಂಡಿತು. ಈ ವೇಳೆ ಸರ್ಕಾರ ಗ್ರೇಡ್ ಆಧಾರದ ಮೇಲೆ ಹಣ ನೀಡಿತ್ತು. C ಗ್ರೇಡ್ ಅಡಿಯಲ್ಲಿ ನೀಡಿದ 50 ಸಾವಿರ ರೂ. ಹಣವನ್ನು ಈಗ ಕೊರೊನಾ ನುಂಗಿದೆ. ಲಾಕ್ಡೌನ್ ವೇಳೆ ದುಡಿಯಲು ಕೆಲಸವಿಲ್ಲದೇ ಮನೆಗಳ ಪರಿಹಾರಕ್ಕೆ ನೀಡಿದ್ದ ಹಣವನ್ನು ಬಳಸಿ ಮುರುಕಲು ಮನೆಯಲ್ಲೇ ವಾಸವಾಗಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ..