ಬಾಗಲಕೋಟೆ ಜಿಲ್ಲೆಯ ಸಾರಿಗೆ ಸಂಸ್ಥೆಗೂ ತಟ್ಟಿದ ಕೊರೊನಾ ಭೀತಿ: ದಿನಕ್ಕೆ 10-15 ಲಕ್ಷ ರೂ ನಷ್ಟ - ಬಾಗಲಕೋಟೆ ಜಿಲ್ಲೆಯ ಸಾರಿಗೆ ಸಂಸ್ಥೆ

🎬 Watch Now: Feature Video

thumbnail

By

Published : Mar 18, 2020, 9:37 PM IST

ಕೊರೊನಾ ವೈರಸ್ ಭೀತಿಯಿಂದ ಸಾರಿಗೆ ಸಂಸ್ಥಗೂ ಬಿಸಿ ತಟ್ಟಿದ್ದು, ಬಾಗಲಕೋಟೆ ಜಿಲ್ಲೆಯ ಸಾರಿಗೆ ಸಂಸ್ಥೆಗೆ ಕೋಟ್ಯಂತರ ರೂಪಾಯಿಗಳ ನಷ್ಟವಾಗಿದೆ. ಒಟ್ಟು 650 ಬಸ್​ ಮಾರ್ಗಗಳಲ್ಲಿ 42 ಮಾರ್ಗಗಳ ಸಂಚಾರವನ್ನು ಜನ ದಟ್ಟಣೆ ಇಲ್ಲದೆ ಬಂದ್ ಮಾಡಲಾಗಿದೆ. ಇದರಿಂದ ಪ್ರತಿ ನಿತ್ಯ 10- 15 ಲಕ್ಷ ರೂಪಾಯಿಗಳ ಹಾನಿ ಆಗಲಿದೆ. ಅಲ್ಲದೆ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ ನಿಷೇಧ ಮಾಡುತ್ತಿರುವುದರಿಂದ ಸುಮಾರು 2 ಕೋಟಿ ನಷ್ಟವಾಗಲಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಮುಂಬಯಿ ಹಾಗೂ ಪೂನಾಗೆ ಹೋಗುವ ಐದು ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು‌ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.