ಕೊರೊನಾ ವೈರಸ್ ಭೀತಿ: ಕೋಟೆನಾಡಿನಲ್ಲಿ ಯಜ್ಞ, ಯಾಗ ನಡೆಸಿದ ವಿಶ್ವಕರ್ಮ ಸಮಾಜ - ಚಿತ್ರದುರ್ಗದಲ್ಲಿ ಕೊರೊನಾ ವೈರಸ್ ಭೀತಿ
🎬 Watch Now: Feature Video
ಚಿತ್ರದುರ್ಗ: ಕೊರೊನಾ ವೈರಸ್ ಭೀತಿ ರಾಜ್ಯಾದ್ಯಂತ ಹರಡುತ್ತಿದ್ದು, ಇಂದು ನಗರದಲ್ಲಿ ವಿಶ್ವಕರ್ಮ ಸಮಾಜದವರು ಯಜ್ಞ,ಯಾಗವನ್ನು ನೆರವೇರಿಸಿದರು. ನಗರದ ಬುರುಜನಹಟ್ಟಿ ರಸ್ತೆಯಲ್ಲಿರುವ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಸಮಾಜದಿಂದ ಸಾಮೂಹಿಕ ಉಪನಯನ ಬ್ರಹ್ಮೋಪದೇಶ ಹಾಗೂ ಕೊರೊನಾ ವೈರಸ್ ನಿವಾರಣೆ, ಲೋಕಕಲ್ಯಾಣಾರ್ಥವಾಗಿ ನಡೆಸಲಾದ ವಿಶ್ವಕರ್ಮ ಯಜ್ಞಯಾಗ ಸಮಾರಂಭದ ಸಾನ್ನಿಧ್ಯ ವಹಿಸಿದ ವಿಶ್ವಬ್ರಾಹ್ಮಣ ಜಗದ್ಗುರು ಅರೆಮಾದನಹಳ್ಳಿ ಮಹಾಸಂಸ್ಥಾನ ಮಠ ಅರಕಲಗೂಡಿನ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.