ಕೊರೊನಾ ತಂದ ಆಪತ್ತು...ಪಪ್ಪಾಯ ಬೆಳೆದ ರೈತ ಕಂಗಾಲು! - ಕೊರೊನಾ ಭೀತಿ
🎬 Watch Now: Feature Video
ಹಾನಗಲ್: ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ತಾಲೂಕಿನ ಸಾವಿಕೇರಿ ಗ್ರಾಮದ ಪಪ್ಪಾಯಿ ಬೆಳೆದ ರೈತ ಸಂಕಷ್ಟದಲ್ಲಿ ಸಿಲುಕಿದ್ದಾನೆ. ರೈತ ಬಸವರಾಜ ಯಲ್ಲಪ್ಪ ಶೇಷಗೆರಿ ತಮ್ಮ ಮೂರು ಎಕರೆ ಜಮೀನಿನಲ್ಲಿ ಪಪ್ಪಾಯ ಹಣ್ಣು ಬೆಳೆದಿದ್ದು,ಕೊರೊನಾ ಭೀತಿಯಿಂದ ಯಾವ ವ್ಯಾಪಾರಿಗಳು ಬರದೆ ಸಂಪೂರ್ಣ ನೆಲಕ್ಕೆ ಬಿದ್ದು ಹಾಳಾಗಿ ಹೋಗುತ್ತಿದೆ. 6 ರಿಂದ 7 ಲಕ್ಷದವರೆಗೆ ಖರ್ಚು ಮಾಡಿರುವ ರೈತನಿಗೆ ಇದೀಗ ದಿಕ್ಕು ತೋಚದಂತಾಗಿದೆ. ಒಂದು ಹಣ್ಣು 1 ರಿಂದ 2 ಕೆಜಿಯವರೆಗೆ ತೂಕ ಬರುತ್ತಿದ್ದು, ಇದೀಗ ಸಂಪೂರ್ಣ ಹಣ್ಣುಗಳು ಮಣ್ಣಾಗಿ ಹೋಗುತ್ತಿವೆ ಎಂದು ರೈತರು ಗೋಳಿಡುತ್ತಿದ್ದಾರೆ.