ಕೊರೊನಾ ಭೀತಿ.. ಠಾಣೆಗೆ ಬರಬೇಕಿದ್ರೆ ಕೈ, ಕಾಲು ತೊಳೆದೇ ಒಳ ಬನ್ನಿ.. - ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊರೊನಾ ಜಾಗೃತಿ
🎬 Watch Now: Feature Video
ತುಮಕೂರು: ಮಾನವ ಸಂಕುಲವನ್ನೇ ಬೆಚ್ಚಿಬೀಳಿಸಿರೋ ಮಾರಕ ಕೊರೊನಾ ವೈರಸ್ ಹರಡುವಿಕೆ ತಡೆಗೆ ನಿರಂತರ ಪ್ರಯತ್ನ ನಡೆಯುತ್ತಿದೆ. ಈ ನಡುವೆ ಎಲ್ಲೆಡೆ ಲಾಕ್‌ಡೌನ್ ಆಗಿದ್ದರೂ ಪೊಲೀಸ್ ಠಾಣೆಗೆ ಮಾತ್ರ ಜನ ಬರುವುದು ನಿಂತಿಲ್ಲ. ಹೀಗಾಗಿ ಪೊಲೀಸ್ ಠಾಣೆಗೆ ಬರೋ ಜನರಿಗೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಠಾಣೆ ಒಳಗೆ ಬರೋ ಮುನ್ನ ಕೈ-ಕಾಲು ತೊಳೆದು ಬರುವಂತೆ ತುಮಕೂರು ಗ್ರಾಮಾಂತರ ಠಾಣೆ ಎದುರು ಬ್ಯಾನರ್ ಹಾಕಲಾಗಿದೆ. ಅಲ್ಲದೆ ಬಕೇಟ್ಗಳಲ್ಲಿ ನೀರು, ಸೋಪನ್ನು ಇಟ್ಟು ಜಾಗೃತಿ ಮೂಡಿಸಲಾಗುತ್ತಿದೆ.