ಪೊಲೀಸ್​ ಠಾಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿಯಿಂದಲೇ ನಾಗಿನ್​ ಡ್ಯಾನ್ಸ್​.. ವಿಡಿಯೋ ವೈರಲ್​​​ - ಪೊಲೀಸರ ನಾಗಿನ್​ ಡ್ಯಾನ್ಸ್

🎬 Watch Now: Feature Video

thumbnail

By

Published : Apr 6, 2021, 3:46 PM IST

ಜಜ್ಪುರ್(ಒಡಿಶಾ) : ಕರ್ತವ್ಯನಿರತ ಪೊಲೀಸರು ಠಾಣೆಯೊಳೆಗೆ ಹಾಡುಗಳಿಗೆ ಡ್ಯಾನ್ಸ್​​ ಮಾಡಿರುವ ವಿಡಿಯೋ ಒಂದು ವೈರಲ್​​ ಆಗಿದೆ. ಈ ಘಟನೆ ಒಡಿಶಾದ ಜಾಜ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರ ಕಚೇರಿಗೆ ಸಮೀಪದಲ್ಲಿರುವ ಪನಿಕೋಯಿಲಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಇಲ್ಲಿನ ಸ್ಥಳೀಯ ಆಚರಣೆಯಾದ ಹೋಳಿ ಮತ್ತು ಡೋಲಾ ಮೆಲಾನಾ ಅಂಗವಾಗಿ ಡ್ಯಾನ್ಸ್​​ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕಾರ್ಯನಿರತ ಪೊಲೀಸ್​​ ಅಧಿಕಾರಿಗಳು ಯುನಿಫಾರ್ಮ್​ನಲ್ಲಿ ಈ ರೀತಿ ವರ್ತಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಇದರಲ್ಲಿ ಓರ್ವ ಕಾನ್ಸ್​​ಟೇಬಲ್​, ಲೇಡಿ ಹೋಂ ಗಾರ್ಡ್ ಹಾಗೂ ಠಾಣೆಯ ಇನ್ಸ್‌ಪೆಕ್ಟರ್ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.