ಹೆಬ್ಬಳ್ಳಿ ಗ್ರಾಮದೇವತೆಗೆ ನೂತನ ರಥ ನಿರ್ಮಾಣ: ಶಾಸಕ ಅಮೃತ್ ದೇಸಾಯಿ ಚಾಲನೆ - ಹೆಬ್ಬಳ್ಳಿ ಗ್ರಾಮದೇವತೆ ಕಾಳಿಕಾ ಮಾತೆ
🎬 Watch Now: Feature Video
ಧಾರವಾಡ: ಹೆಬ್ಬಳ್ಳಿ ಗ್ರಾಮದೇವತೆ ಕಾಳಿಕಾ ಮಾತೆ ನೂತನ ರಥ ನಿರ್ಮಾಣಕ್ಕೆ ಶಾಸಕ ಅಮೃತ ದೇಸಾಯಿ ಪೂಜೆ ಸಲ್ಲಿಸಿದರು. ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಥವನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದೇ ರೀತಿ ಇಂದು ಶಾಸಕ ಅಮೃತ್ ದೇಸಾಯಿ ಅವರು ನೂತನ ರಥದ ನಿರ್ಮಾಣ ಕಾರ್ಯಕ್ಕೆ ಉಳಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ನುಡಿದಂತೆ ನಡೆದ ಶಾಸಕ ಅಮೃತ ದೇಸಾಯಿ ಅವರಿಗೆ ಹೆಬ್ಬಳ್ಳಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.