ವಾಹನ ಸವಾರರಿಂದ ಸಂಚಾರಿ ನಿಯಮ ಉಲ್ಲಂಘನೆ: ಹಾಡಿನ ಮೂಲಕ ಕಾನ್ಸ್‌ಟೇಬಲ್ ಕಿವಿಮಾತು - ಸಿಎಆರ್‌ನ ದಕ್ಷಿಣಾ ವಿಭಾಗದ ಶ್ವಾನದಳ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9231532-thumbnail-3x2-sow.jpg)
ಬೆಂಗಳೂರು: ಬೆಂಗಳೂರಿನ ಸಿಎಆರ್‌ನ ದಕ್ಷಿಣಾ ವಿಭಾಗದ ಶ್ವಾನದಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್ಸ್‌ಟೇಬಲ್ ಮೌಲಲಿ ಕೆ.ಆಲಗೂರ ಈ ಹಿಂದೆ ಸರಗಳ್ಳತನ ಹಾಗೂ ಡ್ರಗ್ಸ್ ಬಗ್ಗೆ ಎಚ್ಚರ ಎಂಬ ಹಾಡನ್ನು ಬರೆದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದರು. ಮೌಲಲಿ ಇದೀಗ ಸಂಚಾರಿ ನಿಯಮ ಮತ್ತು ದಂಡದ ಬಗ್ಗೆ ಜಾಗೃತಿ ಮೂಡಿಸೂವ ಮತ್ತೊಂದು ಹಾಡನ್ನು ಹಾಡಿದ್ದಾರೆ. ಸದ್ಯ ಮೌಲಲಿ ಅವರ ಈ ಹಾಡಿಗೆ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಹಾಗೂ ನಟ ಶಿವರಾಜ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡುವುದರಿಂದ ಏನೆಲ್ಲಾ ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಮಾಹಿತಿ ಈ ಹಾಡಿನಲ್ಲಿದೆ.