ಟೆನ್ಶನ್ ಮಾಡ್ಕೋಬೇಡಿ ಇಮ್ಯೂನಿಟಿ ಪವರ್ ಕಡಿಮೆಯಾಗುತ್ತೆ: ಸೋಂಕಿತ ಸಿಬ್ಬಂದಿಗೆ ಭಾಸ್ಕರ್ ರಾವ್ ಸಲಹೆ - Commissioner Bhaskar Rao
🎬 Watch Now: Feature Video
ಟೆನ್ಶನ್ ಮಾಡಿಕೊಂಡರೆ ದೇಹದಲ್ಲಿ ಇಮ್ಯೂನಿಟಿ ಪವರ್ ಕಡಿಮೆಯಾಗುತ್ತೆ. ಎಲ್ಲರೂ ಆರಾಮವಾಗಿ ಇರಿ, ಏನೂ ಆಗುವುದಿಲ್ಲ ಎಂದು ಕ್ವಾರಂಟೈನ್ನಲ್ಲಿರುವ 500ಕ್ಕೂ ಹೆಚ್ಚು ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಧೈರ್ಯ ತುಂಬಿದ್ದಾರೆ. ಹೋಟೆಲ್ ಮತ್ತು ಪಿಜಿಗಳಲ್ಲಿ ಕ್ವಾರಂಟೈನ್ ಆಗಿರುವ ಪೊಲೀಸರೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಆಯುಕ್ತರು, ಬಿಸಿ ನೀರು, ಒಳ್ಳೆಯ ಊಟ ಸೇವಿಸಿ ಧ್ಯಾನ ಮಾಡುವಂತೆ ಸಲಹೆ ನೀಡಿದರು. ಕೋವಿಡ್ ಲಕ್ಷಣಗಳು ನಿಮಗೆ ಇಲ್ಲದೇ ಇದ್ದರೆ ಯಾವುದೇ ಯೋಚನೆ ಮಾಡಬೇಡಿ. ಅನವಶ್ಯಕ ಯೋಚನೆ ಮಾಡಿ ಮನೋಬಲ ಕುಗ್ಗಿಸಬೇಡಿ ಎಂದು ಧೈರ್ಯ ತುಂಬಿದ್ದಾರೆ.