ತುಮಕೂರಿನಲ್ಲಿ ಕ್ರೈಸ್ತ ಬಾಂಧವರಿಂದ ಸಂಭ್ರಮದ ಕ್ರಿಸ್ಮಸ್ ಆಚರಣೆ - ತುಮಕೂರು ಸುದ್ದಿ
🎬 Watch Now: Feature Video
ಕ್ರೈಸ್ತರ ಪ್ರಮುಖ ಹಬ್ಬವಾದ ಕ್ರಿಸ್ಮಸ್ ಹಬ್ಬವನ್ನು ತುಮಕೂರಿನಲ್ಲಿ ಕ್ರೈಸ್ತ ಬಾಂಧವರು ಸಡಗರದಿಂದ ಚರ್ಚುಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು. ನಗರದಲ್ಲಿನ ಹೊರಪೇಟೆ ವೃತ್ತದ ಬಳಿ ಇರುವ ಲೂರ್ದುಯ ಮಾತಾ ಚರ್ಚ್, ರೆಡ್ ಕ್ರಾಸ್ ಭವನದ ಬಳಿ ಇರುವ ವೆಸ್ಲಿ ಚರ್ಚ್ ಹಾಗೂ ಶಿರಾ ಗೇಟ್ ಬಳಿ ಇರುವ ಟಾಮ್ಲಿನ್ ಸನ್ ಚರ್ಚ್ಗಳಲ್ಲಿ ಬೆಳಗ್ಗೆಯಿಂದಲೇ ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸುವ ಮೂಲಕ ಕ್ರಿಸ್ಮಸ್ ಹಬ್ಬವನ್ನು ಆಚರಿಸುವ ಜೊತೆಗೆ ಪ್ರತಿಯೊಬ್ಬರೂ ಶುಭಾಶಯ ವಿನಿಮಯ ಮಾಡಿಕೊಂಡರು.