ಕಾಡ್ತಿದೆ ನೆಟ್ವರ್ಕ್ ಸಮಸ್ಯೆ.. ಎತ್ತರದ ಪ್ರದೇಶದಲ್ಲಿ ಶೆಡ್ ನಿರ್ಮಿಸಿಕೊಂಡ ವಿದ್ಯಾರ್ಥಿಗಳು - shed for a network to attend online class
🎬 Watch Now: Feature Video
ಬೆಳ್ತಂಗಡಿ: ಸರ್ಕಾರವೇನೋ ಸರ್ಕಾರಿ ಶಾಲಾ ಮಕ್ಕಳಿಗೂ ಆನ್ಲೈನ್ ಕ್ಲಾಸ್ ನಡೆಸುವಂತೆ ಆದೇಶ ಹೊರಡಿಸಿತು. ಪೋಷಕರೂ ಸಾಲಸೂಲ ಮಾಡಿ ಮೊಬೈಲ್ ತೆಗೆದುಕೊಟ್ಟರು. ಆದರೆ, ಪಾಠ ಕೇಳೋಕೆ ಇಲ್ಲಿ ನೆಟ್ವರ್ಕ್ನದ್ದೇ ಸಮಸ್ಯೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಿಟ್ಟೂ ಬಿಡದೆ ಕಾಡುತ್ತಿರುವ ನೆಟ್ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಮನೆ ಬಳಿಯ ಎತ್ತರದ ಪ್ರದೇಶಕ್ಕೆ ತೆರಳಿ ಅಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಆನ್ಲೈನ್ ಪಾಠ ಕೇಳುತ್ತಿದ್ದಾರೆ.
Last Updated : Jul 11, 2021, 3:26 PM IST