ಸಂಕಷ್ಟದಲ್ಲಿ ಚನ್ನಪಟ್ಟಣ ಬೊಂಬೆ ಉದ್ಯಮ : ಸೊಗಸಾದ ಆಟಿಕೆಯ ಮಾರುಕಟ್ಟೆ ಹಾದಿ ಇನ್ನಷ್ಟು ದುರ್ಗಮ - Ramanagar news
🎬 Watch Now: Feature Video
300 ವರ್ಷಗಳ ಇತಿಹಾಸವಿರುವ ಬೊಂಬೆಗಳ ಉದ್ಯಮ ಕೆಲ ಕಾಲದಿಂದ ಸಂಕಷ್ಟಕ್ಕೆ ಸಿಲುಕಿದೆ. ಮಾರುಕಟ್ಟೆಯಲ್ಲಿ ಸ್ಪರ್ಧಿಸಲಾಗದೆ ಅಳಿವಿನಂಚಿಗೆ ಸಾಗುವ ಭೀತಿ ಎದುರಿಸುತ್ತಿದೆ. ಮೊದಲೆಲ್ಲಾ ಚನ್ನಪಟ್ಟಣದ ಬೊಂಬೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿತ್ತು. ಆದ್ರೆ, ಬರುಬರುತ್ತಾ ಚೀನಾ ಆಟಿಕೆಗಳು ಕಡಿಮೆ ಬೆಲೆಗೆ ಸಿಗುತ್ತಿದ್ದು, ಗ್ರಾಹಕರನ್ನ ಸೆಳೆಯಲು ಮುಂದಾದವು ಎನ್ನುತ್ತಾರೆ ಉದ್ಯಮಿಗಳು.