ಚಾಮರಾಜನಗರ ದಸರಾಗೆ ಅದ್ದೂರಿ ತೆರೆ: ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿದ ವಿಜಯ್ ಗಾಯನ - ಸಂಗೀತ ಕಾರ್ಯಕ್ರಮ
🎬 Watch Now: Feature Video
ಚಾಮರಾಜನಗರ: ದಸರಾ ಉಪಸಮಿತಿಯಿಂದ ನಡೆದ ಜಿಲ್ಲಾ ದಸರಾಗೆ ಅದ್ದೂರಿ ತೆರೆ ಬಿದ್ದಿದ್ದು, ಇದರ ನಿಮಿತ್ತ ನಿನ್ನೆ ಸಂಗೀತ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ನಡೆಸಿಕೊಟ್ಟ ಸಂಗೀತ ರಸಸಂಜೆ ದಸರಾಗೆ ಮೆರಗು ತಂದು ಕೊಟ್ಟಿತು. ವಿಜಯ್ ಅವರು ಜನ ಮೆಚ್ಚಿದ ಹಾಡಗಳನ್ನು ಹಾಡಿದ್ದು, ನೀನೇ ರಾಜಕುಮಾರ, ಕನಸಲ್ಲಿ ಬಂದವಳೇ, ಏನಮ್ಮಿ-ಏನಮ್ಮಿ ಸೇರಿದಂತೆ ಜಾನಪದ ಹಾಡುಗಳು ಅವರ ಕಂಠದಿಂದ ಹೊರಹೊಮ್ಮಿದವು. ಇನ್ನು ಇವರ ಹಾಡಿಗೆ ನೆರದಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.