ಅನಾಥಶ್ರಮದಲ್ಲಿ ಅರ್ಥಪೂರ್ಣವಾಗಿ ಡಿ ಬಾಸ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು - ವಿಕಾಸನ ಅನಾಥಾಶ್ರಮ
🎬 Watch Now: Feature Video

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 44ನೇ ವರ್ಷದ ಹುಟ್ಟುಹಬ್ಬವನ್ನು ದಚ್ಚು ಅಭಿಮಾನಿಗಳು ಅರ್ಥಪೂರ್ಣವಾಗಿ ಅನಾಥ ಮಕ್ಕಳೊಂದಿಗೆ ಆಚರಿಸಿದ್ದಾರೆ. ಮಂಡ್ಯದ ಹೊರ ಹೊಲಯದಲ್ಲಿರುವ ವಿಕಾಸನ ಅನಾಥಾಶ್ರಮದಲ್ಲಿ ಸವಿತಾ ಸಮಾಜದ ಓಂಕಾರ್ ಅಭಿಮಾನಿ ನೇತೃತ್ವದಲ್ಲಿ ಮಕ್ಕಳ ಕೈಯಲ್ಲಿ ಕೇಕ್ ಕತ್ತರಿಸಿ, ಸ್ವೀಟ್, ಹಣ್ಣು - ಹಂಪಲು ಹಾಗೂ ಅನಾಥಾಶ್ರಮದ ಮಕ್ಕಳಿಗೆ ಬಿರಿಯಾನಿ ಊಟ ಹಂಚುವ ಮೂಲಕ ಹುಟ್ಟುಹಬ್ಬ ಆಚರಿಸಿದರು.