ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರನ್ನು ಮುದ್ದಾಡಿದ ಪುಟ್ಟ ಕರು: ವಿಡಿಯೋ ವೈರಲ್ - Cattle love towards Udupi swamiji
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8128911-1038-8128911-1595418785533.jpg)
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರನ್ನು ಪುಟ್ಟ ಕರುವೊಂದು ಪ್ರೀತಿಯಿಂದ ಮುದ್ದಾಡುವ ದೃಶ್ಯ ವೈರಲ್ ಆಗಿದೆ. ನೀಲಾವರ ಗೋಶಾಲೆಯಲ್ಲಿರುವ ಸಾವಿರಕ್ಕೂ ಹೆಚ್ಚು ಗೋವುಗಳ ಲಾಲನೆ ಪಾಲನೆಯಲ್ಲೇ ಸ್ವಾಮೀಜಿ ಸದಾಕಾಲ ತೊಡಗಿರುತ್ತಾರೆ. ನಿತ್ಯವೂ ನೀಲಾವರದ ಗೋಶಾಲೆಯಲ್ಲೇ ಇರುವ ಶ್ರೀಗಳು, ಅಲ್ಲಿಯೇ ಪೂಜೆ, ಪ್ರವಚನ ಕೈಗೊಳ್ಳುತ್ತಾರೆ. ಸಂಜೆ ಪ್ರವಚನದ ವೇಳೆಯಲ್ಲಿ ಕರುವೊಂದು ಬಂದು ಸ್ವಾಮೀಜಿ ಅವರನ್ನು ಮುದ್ದಾಡಿದೆ. ಈ ಅನಿರೀಕ್ಷಿತ ಸ್ಪರ್ಶದಿಂದ ಸ್ವಲ್ಪವೂ ವಿಚಲಿತರಾಗದ ಸ್ವಾಮೀಜಿ ತಮ್ಮ ಪ್ರವಚನ ಮುಂದುವರಿಸುತ್ತಾರೆ. ಅಕ್ರಮ ಗೋಸಾಗಣೆ ವೇಳೆ ರಕ್ಷಸಲ್ಪಟ್ಟ ಹಸುಗಳು, ಗೊಡ್ಡುದನಗಳು, ಗಾಯಾಳು ದನಗಳನ್ನೇ ಶ್ರೀಗಳು ಸಲಹುತ್ತಿದ್ದಾರೆ.