ಕೊರೊನಾಗೂ ಡೋಂಟ್ ಕೇರ್! ಭರ್ಜರಿಯಾಗಿ ಸಾಗಿದ ಜಾನುವಾರ ಸಂತೆ - ಹಾವೇರಿಯಲ್ಲಿ ಜಾನುವಾರ ಸಂತೆ
🎬 Watch Now: Feature Video

ವಿಶ್ವದೆಲ್ಲಡೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲಿದೆ. ರಾಜ್ಯ ಸರ್ಕಾರ ಜಾತ್ರೆ, ಸಂತೆ, ಸಭೆ, ಸಮಾರಂಭಗಳನ್ನು ರದ್ದುಪಡಿಸಿದೆ. ವಿಶೇಷವಾದ ಸೂಚನೆಗಳನ್ನು ನೀಡಿ ಕೆಲ ಜಾತ್ರೆಗಳಿಗೆ ಅವಕಾಶ ನೀಡಿದೆ. ಮದುವೆ ಮತ್ತು ಅಂತ್ಯಕ್ರಿಯೆಗೂ ಜನರ ಪಾಲ್ಗೊಳ್ಳುವಿಕೆಯನ್ನು ಮಿತಿಗೊಳಿಸಿದೆ. ಇದೆಲ್ಲದರ ನಡುವೆ ಹಾವೇರಿಯಲ್ಲಿ ಗುರುವಾರಕ್ಕೊಮ್ಮೆ ನಡೆಯುವ ಜಾನುವಾರು ಸಂತೆಯಲ್ಲಿ ಜನಜಂಗುಳಿ ಸೇರುತ್ತಿದೆ. ಸಂತೆಯಲ್ಲಿ ಯಾವುದೇ ಸಾಮಾಜಿಕ ಅಂತರ ಇರುವುದಿಲ್ಲ. ಮುಖಗವಸು ಧರಿಸದೆ, ಸ್ಯಾನಿಟೈಜರ್, ಸ್ಕ್ರೀನಿಂಗ್ ಇಲ್ಲದೆ ಜಾನುವಾರ ವ್ಯಾಪಾರಸ್ಥರು ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.