ತಾಕತ್ ಇದ್ರೆ ನನ್ನ ಹಿಡಿಯಿರಿ: ಟ್ರಾಫಿಕ್ ಪೊಲೀಸ್ಗೇ ಓಪನ್ ಚಾಲೆಂಜ್ ಹಾಕಿದ ಡ್ರೈವರ್! - Bangalore police news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4516833-thumbnail-3x2-driver.jpg)
ಎರಡು ದಿನಗಳ ಹಿಂದೆ ಹಲಸೂರು ಗೇಟ್ ಬಳಿ ಪೊಲೀಸ್ ಪೇದೆವೋರ್ವ ಟೆಂಪೋ ಚಾಲಕನಿಗೆ ಒನ್ ವೇಯಲ್ಲಿ ಹೋಗಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಥಳಿಸಿದ ಘಟನೆ ಸಿಟಿ ಮಾರ್ಕೆಟ್ ಫ್ಲೈ ಓವರ್ ಬಳಿ ನಡೆದಿತ್ತು. ಈ ಪ್ರಕರಣಕ್ಕೆ ಇದೀಗ ಮೈಸೂರಿನ ಕ್ಯಾಬ್ ಚಾಲಕನೋರ್ವ ತಾಕತ್ತಿದ್ರೆ ನನ್ನ ಕಾರ್ ತಡೆದು, ಫೈನ್ ಹಾಕಿ ಎಂದು ಚಾಲಕನನ್ನು ಥಳಿಸಿದ್ದ ಪೊಲೀಸ್ ಪೇದೆಗೆ ಸವಾಲು ಹಾಕಿದ್ದಲ್ಲದೆ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ನನ್ನ ಬಳಿ ಯಾವುದೇ ಡಾಕ್ಯುಮೆಂಟ್ ಇಲ್ಲ, ನಾಲ್ಕು ವರ್ಷಗಳ ಹಿಂದೆನೇ ಎಲ್ಲಾ ಅವಧಿ ಮುಗಿದಿವೆ. ಅ. 2ರಂದು ಬೆಂಗಳೂರಿನ ಏರ್ರ್ಪೋಟ್ ಗೆ ಬರಲಿದ್ದೇನೆ. ತಾಕತ್ ಇದ್ರೆ ನನ್ನ ಹಿಡಿಯಿರಿ ಎಂದು ಅವಾಜ್ ಹಾಕಿದ್ದಾನೆ. ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹಿರಿಯ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.