ನಂಬಿದರೆ ನಂಬಿ ಬಿಟ್ಟರೆ ಬಿಡಿ... ಇದು ಬೆಂಗಳೂರಿನಲ್ಲಿರುವ ಜೆಡಿಎಸ್ ಕಚೇರಿ! - JDS State Head Office at Bengaluru
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4834942-thumbnail-3x2-hrs.jpg)
ಬೆಂಗಳೂರು: ರಾಜಕೀಯ ಪಕ್ಷದ ಕಚೇರಿಗೆ ಇರಬೇಕಾದ ಯಾವ ಲಕ್ಷಣವೂ ಇದಕ್ಕಿಲ್ಲ. ಕರ್ನಾಟಕದ ಪ್ರಬಲ ಪ್ರಾದೇಶಿಕ ಪಕ್ಷ ಜೆಡಿಎಸ್ ರಾಜ್ಯ ಪ್ರಧಾನ ಕಚೇರಿ ಇದು. ಪ್ರವೇಶ ದ್ವಾರದಲ್ಲಿ ತೆನೆ ಹೊತ್ತ ಮಹಿಳೆ ಶಿಲ್ಪ, ತಾರಸಿ ಮೇಲೆ ಚಿಕ್ಕದೊಂದು ಬಾವುಟ ಹೊರತುಪಡಿಸಿದರೆ ಇದೊಂದು ರಾಜಕೀಯ ಪಕ್ಷದ ಕಚೇರಿ ಎಂದು ಸಾಬೀತು ಮಾಡಲು ಸಾಧ್ಯವೇ ಇಲ್ಲ. ಹೈಟೆಕ್ ಲುಕ್ ಕೊಡುವ ಭರದಲ್ಲಿ ಪಕ್ಷದ ಗುರುತೇ ಸಿಗದಂತೆ ಮಾಡಿರುವುದು ವಿಪರ್ಯಾಸ.