ರಾಜಕಾರಣವನ್ನೇ ಮಾಡಬೇಕು ಎಂದರೆ ಬೇರೆ ಸಾಕಷ್ಟು ವಿಷಯಗಳಿವೆ: ಸಿ.ಟಿ.ರವಿ - ಪ್ರತಿಪಕ್ಷಗಳಿಗೆ ಸಿಟಿ ರವಿ ವಾಗ್ದಾಳಿ
🎬 Watch Now: Feature Video
ಸಂಖ್ಯಾಬಲದಿಂದ ಬಿಜೆಪಿ ಅಧಿಕಾರದಲ್ಲಿದೆ. ಕಾಂಗ್ರೆಸ್-ಜೆಡಿಎಸ್ ಪ್ರತಿಪಕ್ಷದ ಸ್ಥಾನದಲ್ಲಿವೆ. ಹಾಗಾದ್ರೆ ಅವುಗಳಿಗೆ ಜವಾಬ್ದಾರಿ ಇಲ್ವ? ರೋಗ ಬಿಜೆಪಿ ಬೆಂಬಲಿಗರಿಗೆ ಮಾತ್ರ ಬರುತ್ತಾ? ಎಲ್ಲರಿಗೂ ಬರುತ್ತಾ? ಕೊರೊನಾ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಎಲ್ಲರಿಗೂ ಬಂದಿದೆ. ರಾಜಕಾರಣಕ್ಕೆ ಸಂಬಂಧವೇ ಇಲ್ಲದವರಿಗೂ ಸೋಂಕು ತಗುಲಿದೆ. ಕೊರೊನಾ ರಾಜಕಾರಣ ಮಾಡಿಲ್ಲ. ಹಾಗಾದ್ರೆ ಇವರು ಏಕೆ ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣವನ್ನೇ ಮಾಡಬೇಕು ಎಂದರೆ ಬೇರೆ ಸಾಕಷ್ಟು ವಿಷಯಗಳಿವೆ. ಅಲ್ಲಿ ಮಾಡಲಿ. ಇದು ರಾಜಕಾರಣದ ವಿಷಯವಲ್ಲ. ರಾಜಕಾರಣದ ಬಳಕೆ ದುರದೃಷ್ಟಕರ ಸಂಗತಿ ಎಂದು ಸಿ.ಟಿ.ರವಿ ಹೇಳಿದ್ದಾರೆ.