ನಿಷೇಧದ ನಡುವೆಯೂ ಅವೈಜ್ಞಾನಿಕ ಬುಲ್ ಟ್ರಾಲ್ ಮೀನುಗಾರಿಕೆ.. ಎರಡು ಬೋಟ್ ವಶಕ್ಕೆ
🎬 Watch Now: Feature Video
ಕಾರವಾರ: ಕರಾವಳಿಯಲ್ಲಿ ಬಿಲ್ ಟ್ರಾಲ್ ಹಾಗೂ ಲೈಟ್ ಫಿಶಿಂಗ್ ಮೀನುಗಾರಿಕೆಗೆ ನಿಷೇಧವಿದೆ. ಮೀನುಗಳ ಸಂತತಿ ನಾಶವಾಗದಿರಲಿ ಎಂಬ ಕಾರಣಕ್ಕೆ ಸರ್ಕಾರರವೇ ಇಂತಹ ನಿಷೇಧ ಹೇರಿದೆ. ಉತ್ತರಕನ್ನಡ ಜಿಲ್ಲೆಯ ಮೀನುಗಾರರು ಈ ಅವೈಜ್ಞಾನಿಕ ಮೀನುಗಾರಿಕೆ ಪದ್ಧತಿಯಿಂದ ದೂರ ಉಳಿದಿದ್ದಾರೆ. ಆದರೆ, ಹೊರ ಜಿಲ್ಲೆಗಳ ಮೀನುಗಾರರು ಇಲ್ಲಿನ ಕರಾವಳಿ ತೀರಕ್ಕೆ ಬಂದು ಬುಲ್ ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದಾರೆ. ಹಾಗಾಗಿ, ಕಾರವಾರದಲ್ಲಿ ಎರಡು ಬೋಟ್‌ಗಳನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.