ಹಾವೇರಿಯಲ್ಲಿ ದೀಪಾವಳಿ ಪ್ರಯುಕ್ತ ಹೋರಿಗಳ ಓಟ: ಸಂಭ್ರಮದಲ್ಲಿ ಜನತೆ - ಹಾವೇರಿಯಲ್ಲಿ ದೀಪಾವಳಿ ಪ್ರಯುಕ್ತ ಹೋರಿಗಳ ಓಟ
🎬 Watch Now: Feature Video

ಹಾವೇರಿ: ಜಿಲ್ಲೆಯ ಹಲವೆಡೆ ದೀಪಾವಳಿ ಪಾಡ್ಯದ ನಿಮಿತ್ಯ ಹೋರಿಗಳನ್ನ ಓಡಿಸಲಾಯ್ತು. ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು, ಹಾನಗಲ್ ತಾಲೂಕಿನ ಮಲಗುಂದ ಸೇರಿದಂತೆ ಕೆಲವೆಡೆ ಹೋರಿಗಳನ್ನ ಓಡಿಸಿ ರೈತರು ಸಂಭ್ರಮಿಸಿದ್ರು. ಗ್ರಾಮದ ಇಕ್ಕಟ್ಟಾದ ರಸ್ತೆಯಲ್ಲಿ ರೈತರು ಅಲಂಕಾರ ಮಾಡಿದ ಹೋರಿಗಳನ್ನ ಓಡಿಸಿದ್ರೆ, ಕೆಲವು ಯುವಕರು ಓಡುತ್ತಿರೋ ಹೋರಿಗಳನ್ನ ಹಿಡಿಯಲು ಹರಸಾಹಸ ಮಾಡ್ತಿದ್ರು. ನೆರೆದಿದ್ದ ಜನರು ಕೇಕೆ, ಸಿಳ್ಳೆ, ಚಪ್ಪಾಳೆಗಳ ಮೂಲಕ ಹೋರಿಗಳಿಗೆ ಹುರಿದುಂಬಿಸ್ತಿದ್ರು.