ವಿಡಿಯೋ ನೋಡಿ: ಕಣ್ಣಂಚಿನಲ್ಲಿ ನೀರು ತುಂಬಿ ವಿದಾಯದ ನುಡಿಗಳನ್ನಾಡಿದ ಯಡಿಯೂರಪ್ಪ - BS Yediyurappa become emotional while announcing resignation
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12578004-thumbnail-3x2-cdwrwerem.jpg)
ರಾಜಕೀಯದ ಹಲವು ಮಜಲುಗಳಲ್ಲಿ ಏರಿಳಿತ ಕಂಡರೂ ಎದೆಗುಂದದೆ ಹುಲಿಯಂತೆ ಘರ್ಜಿಸುತ್ತಿದ್ದ ಬೂಕನಕೆರೆ ಯಡಿಯೂರಪ್ಪ ಸಿದ್ದಲಿಂಗಪ್ಪ ಇವತ್ತು ವಿದಾಯದ ಮಾತನಾಡುವ ವೇಳೆ ಗದ್ಗದಿತರಾದರು. ಮತ್ತೊಂದೆಡೆ, ಇಂದು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ತರ ಬದಲಾವಣೆಯ ಮಹತ್ವದ ದಿನವೂ ಹೌದು. ಬಿಜೆಪಿ ಸರ್ಕಾರ ಎರಡು ವರ್ಷದ ಆಡಳಿತಾವಧಿ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾಶವೇಶದಲ್ಲಿ ಬಿಎಸ್ವೈ ಪದತ್ಯಾಗದ ನಿರ್ಧಾರ ತಿಳಿಸಿದರು. ರಾಜೀನಾಮೆಗೂ ಮುನ್ನ ಅವರು ಭಾವುಕವಾಗಿ ಭಾಷಣ ಮಾಡಿದರು. ಹೀಗೆ ಮಾತನಾಡುತ್ತಾ ವೇದಿಕೆಯ ಮೇಲೆಯೇ ಗದ್ಗದಿತರಾದ ಅವರ ಕಣ್ಣಂಚಿನಲ್ಲಿ ನೀರು ತುಂಬಿತ್ತು. ಆದರೂ ಅದನ್ನು ಮರೆಮಾಚುತ್ತಾ, ನನಗೆ ದುಃಖವಿಲ್ಲ, ಸಂತೋಷದಿಂದಲೇ ರಾಜೀನಾಮೆ ನೀಡುತ್ತಿರುವೆ ಎಂದರು.