ಕಾವೇರಿಯ ಜಲ ಮೂಲದ ದಿಕ್ಕು ಬದಲಾವಣೆ ಬ್ರಹ್ಮಗಿರಿಯ ಬೆಟ್ಟ ಕುಸಿತಕ್ಕೆ ಕಾರಣವಾಯ್ತಾ.!? - Brahmagiri hill slide
🎬 Watch Now: Feature Video
ಕೊಡಗು(ತಲಕಾವೇರಿ): ಬ್ರಹ್ಮಗಿರಿ ಬೆಟ್ಟ ಸಾಲಿನ ಗಜಗಿರಿ ಬೆಟ್ಟ ಕುಸಿತಕ್ಕೆ ಈ ಹಿಂದೆ ತಲಕಾವೇರಿಯಲ್ಲಿ ನಡೆಸಿದ್ದ ಅವೈಜ್ಞಾನಿಕ ಕಾಮಗಾರಿಯೂ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ತಲಕಾವೇರಿಯ ಬ್ರಹ್ಮಕುಂಡಿಕೆ ಬಳಿ ತಡೆಗೋಡೆಯನ್ನು ನಿರ್ಮಿಸುವಾಗ ಕಾವೇರಿ ನೀರಾವರಿ ನಿಗಮದವರು ಮಾಡಿದಂತಹ ಕೆಲಸದಿಂದ ಬ್ರಹ್ಮಗಿರಿ ಬೆಟ್ಟದಲ್ಲಿ ಉದ್ಭವಿಸಿ ನಿರ್ದಿಷ್ಟ ಪಥದಲ್ಲಿ ಹರಿಯುತ್ತಿದ್ದ ಜಲಮೂಲ ದಿಕ್ಕನ್ನು ಬದಲಿಸಿದೆ. ನಿರ್ದಿಷ್ಟ ಸ್ಥಳದಲ್ಲಿ ಹರಿಯಬೇಕಿದ್ದ ನೀರು ಮೂಲವನ್ನು ಬದಲಿಸಿದೆ. ಅಲ್ಲದೆ ಅರಣ್ಯ ಇಲಾಖೆ ಬೆಟ್ಟದ ಮೇಲೆ ಇಂಗು ಗುಂಡಿಗಳನ್ನು ನಿರ್ಮಿಸಿದ್ದೂ ಕೂಡ ಬೆಟ್ಟ ಕುಸಿಯಲು ಮುಖ್ಯ ಕಾರಣ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ತಲಕಾವೇರಿ ದೇವಾಲಯದ ಮುಖ್ಯಸ್ಥರಾದ ತಮ್ಮಯ್ಯ ಅವರೊಂದಿಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.