thumbnail

ಬಾಂಬ್​​ ಪತ್ತೆ ಹಿನ್ನೆಲೆ: ಮಂಗಳೂರು ವಿಮಾನ ನಿಲ್ದಾಣಕ್ಕೆ ಬ್ಲಾಕ್ ಕಮಾಂಡೋಸ್​​ ಆಗಮನ

By

Published : Jan 21, 2020, 10:56 AM IST

Updated : Jan 21, 2020, 11:49 AM IST

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿ‌ನ್ನೆ ಬಾಂಬ್ ಪತ್ತೆಯಾದ ಬಳಿಕ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದ್ದು, ಪ್ರತಿಯೊಂದು ವಾಹನದ ಸಂಖ್ಯೆ ಬರೆದಿಟ್ಟುಕೊಳ್ಳಲಾಗುತ್ತಿದೆ. ಪ್ರತಿ ವಾಹನದ ಡಿಕ್ಕಿ ತೆರೆದು ಬ್ಯಾಗ್​ಗಳನ್ನು ತಪಾಸಣೆ ಮಾಡಲಾಗುತ್ತಿದೆ. ಈಗಾಗಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಬ್ಲಾಕ್ ಕಮಾಂಡೋಸ್ ಆಗಮನವಾಗಿದೆ. ನಿನ್ನೆ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ವ್ಯಕ್ತಿ ಸಲೂನ್​​​ವೊಂದರಲ್ಲಿ ಮತ್ತೊಂದು ಬ್ಯಾಗ್ ಇಡಲು ಬಂದಿದ್ದ. ಆದ್ರೆ ಸಲೂನ್ ಮಾಲೀಕ ಒಳಗಿಡಲು ನಿರಾಕರಿಸಿದ್ದಕ್ಕೆ ಅದನ್ನು ಸಲೂನ್ ಹೊರಭಾಗದಲ್ಲಿ ಇಟ್ಟು ವಿಮಾನ ನಿಲ್ದಾಣಕ್ಕೆ ತೆರಳಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
Last Updated : Jan 21, 2020, 11:49 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.