ಶಿವಮೊಗ್ಗದಲ್ಲಿ ದಸರಾ ಪ್ರಯುಕ್ತ ದೇಹದಾರ್ಢ್ಯ ಸ್ಪರ್ಧೆ: ನೋಡುಗರ ಗಮನ ಸೆಳೆದ ಬಾಡಿ ಬಿಲ್ಡರ್‌ಗಳು - ಮುಖದ ಭಾವನೆ
🎬 Watch Now: Feature Video
ಶಿವಮೊಗ್ಗ: ನಾಡಹಬ್ಬ ದಸರಾ ಪ್ರಯುಕ್ತ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ದೇಹದಾರ್ಢ್ಯ ಸ್ಪರ್ಧೆ ನೋಡುಗರ ಗಮನ ಸೆಳೆಯಿತು. ಐದು ವಿಭಾಗಗಳಾಗಿ ವಿಂಗಡಿಸಿದ್ದ ಈ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ತೀರ್ಪುಗಾರರ ಸೂಚನೆ ಅನುಸಾರ ವಿವಿಧ ಭಂಗಿ ಪ್ರದರ್ಶಿಸಿ ಗಮನ ಸೆಳೆದರು. ತೀರ್ಪುಗಾರರು ಕೂಡ ಸ್ಪರ್ಧಿಗಳ ಅಂಗಸೌಷ್ಠವ ಭಂಗಿ ಹಾಗೂ ಮುಖದ ಭಾವನೆಯನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಿದರು.