ಸರ್ಕಾರ 144 ಸೆಕ್ಷನ್ ವಿಧಿಸಿ ಪ್ರತಿಭಟನೆ ಹಕ್ಕನ್ನು ಕಿತ್ತುಕೊಂಡಿದೆ: ಸೌಮ್ಯ ರೆಡ್ಡಿ ವಾಗ್ದಾಳಿ - soumya reddy statement against cab
🎬 Watch Now: Feature Video
ಬೆಂಗಳೂರು: ಕೇಂದ್ರ ಸರ್ಕಾರ ಸುಮ್ಮನೆ ಪೌರತ್ವ ಕಾಯ್ದೆ ಜಾರಿ ತಂದಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ಮಾಡುವ ಹಕ್ಕು ನಮಗಿದೆ. 144 ಸೆಕ್ಷನ್ ವಿಧಿಸುವ ಮೂಲಕ ರಾಜ್ಯ ಸರ್ಕಾರ ಪ್ರತಿಭಟನೆ ಹಕ್ಕನ್ನು ಕಸಿದುಕೊಂಡಿದೆ. ಕೇಂದ್ರ ಜಾರಿಗೆ ತಂದಿರುವ ಕಾಯ್ದೆಯ ವಿರುದ್ಧ ಜನ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಕುಮ್ಮಕ್ಕು ಅಲ್ಲ. ಸ್ವತಂತ್ರವಾಗಿ ಪ್ರತಿಭಟಿಸುತ್ತಿದ್ದಾರೆ. ಜನರ ಕೂಗು ಕೇಳಿಸಿಕೊಳ್ಳಬೇಕು ಎಂದು ಜಯನಗರ ಶಾಸಕಿ ಸೌಮ್ಯ ರೆಡ್ಡಿ ವಾಗ್ದಾಳಿ ನಡೆಸಿದ್ಡಾರೆ