ಹಾವೇರಿಯ ರೈತರ ಪ್ರತಿಭಟನೆಯಲ್ಲಿ ನ್ಯಾಯವಾದಿ ಬಿ ಡಿ ಹಿರೇಮಠ.. ಸಂತ್ರಸ್ತ ಅನ್ನದಾತರಿಗೆ ಸಾಥ್ - ಹಾವೇರಿ ರೈತ ಪ್ರತಿಭಟನೆಗೆ ಬಿ.ಡಿ.ಹಿರೇಮಠ ಸಾಥ್
🎬 Watch Now: Feature Video
ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನ ರೈತರು ಈಗಾಗಲೇ ತುಂಗಾ ಮೇಲ್ದಂಡೆ ಯೋಜನೆಯಿಂದ ತಮ್ಮ ಭೂಮಿ ಕಳೆದುಕೊಂಡಿದ್ದಾರೆ. ಈ ರೀತಿ ಭೂಮಿ ಕಳೆದುಕೊಂಡ ಸಾವಿರಾರು ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಆದರೆ, ಮತ್ತೆ ರೈತರಿಗೆ ಭೂಮಿ ಕಳೆದುಕೊಳ್ಳುವ ಆತಂಕ ಶುರುವಾಗಿದೆ. ರಟ್ಟಿಹಳ್ಳಿ ತಾಲೂಕಿನ ಚಟ್ನಹಳ್ಳಿಯಿಂದ ಶಿಕಾರಿಪುರಕ್ಕೆ ನೀರು ಸಾಗಿಸುವ ಯೋಜನೆಗೆ ರೈತರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಇದನ್ನು ಖಂಡಿಸಿ ಆರಂಭಿಸಿರುವ ಪ್ರತಿಭಟನೆ 12 ದಿನ ಪೂರೈಸಿದೆ. ಈ ಪ್ರತಿಭಟನೆಗೆ ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ ಡಿ ಹಿರೇಮಠ ಸಾಥ್ ನೀಡಿರುವುದು ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ. ಈ ಕುರಿತು ಒಂದು ವರದಿ.