ನಾನು ಎಲ್ಲಿದ್ದರೂ ಕೆಲಸ ಆಗುತ್ತೆ ಅಂದ್ಮೇಲೆ ಬೇರೆ ಪಕ್ಷಕ್ಕೆ ಯಾಕ್ ಹೋಗ್ಬೇಕು?.. ಬಸವರಾಜ ಹೊರಟ್ಟಿ - Basavaraja Horatti meet CM Yeddyurappa
🎬 Watch Now: Feature Video
ಬೆಂಗಳೂರು:ನಾನು ಬೇರೆ ಯೋಚನೆ ಮಾಡಿಲ್ಲ. ಪಕ್ಷದಲ್ಲೇ ಇರುತ್ತೇನೆ ಎಂದು ವಿಧಾನಪರಿಷತ್ನ ಹಿರಿಯ ಸದಸ್ಯ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ. ನಾನು ಎಲ್ಲಿದ್ದರೂ ನನ್ನ ಕೆಲಸ ಆಗುತ್ತವೆ ಎಂದ ಮೇಲೆ ನಾನು ಬೇರೆ ಕಡೆ ಏಕೆ ಹೋಗ್ಬೇಕು ಎಂದ ಅವರು, ನಾನು ಮೊದಲಿನಿಂದಲೂ ದೇವೇಗೌಡರ ಮನೆಗೆ ಹೆಚ್ಚು ಹೋಗುತ್ತಿರಲಿಲ್ಲ. ನಾವು ಹೋದರೆ ಯಾರ್ಯಾರೋ ಏನೇನೋ ಹೇಳಿಬಿಡ್ತಿದ್ರು. ಸಿಎಂ ಬಿ ಎಸ್ ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನೆಗೆ ನಾನು ಜಾಸ್ತಿ ಹೋಗ್ತಾ ಇದ್ದೀನಿ. ಅಭಿವೃದ್ಧಿ ಕೆಲಸದ ಜತೆಗೆ ರಾಜಕೀಯವನ್ನೂ ಮಾತನಾಡಿದ್ದೀನಿ ಎಂದರು.