ಹರಿಹರ ತಲುಪಿದ ಬಸವ ಜಯಮೃತ್ಯುಂಜಯ ಶ್ರೀ ಪಾದಯಾತ್ರೆ - vachanananda Shri
🎬 Watch Now: Feature Video
ದಾವಣಗೆರೆ: ಬಸವ ಜಯಮೃತ್ಯುಂಜಯ ಶ್ರೀಯವರು 2ಎ ಮೀಸಲಾತಿಗಾಗಿ ಕೂಡಲ ಸಂಗಮದಿಂದ ಬೆಂಗಳೂರು ತನಕ ಹಮ್ಮಿಕೊಂಡಿರುವ ಪಾದಯಾತ್ರೆ ಜಿಲ್ಲೆಗೆ ಪ್ರವೇಶಿಸಿತು. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನಿಂದ ಆಗಮಿಸಿದ ಪಾದಯಾತ್ರೆ ಹರಿಹರ ತಲುಪಿದೆ. ಜಯಮೃತ್ಯುಂಜಯ ಶ್ರೀಯವರೊಂದಿಗೆ ಬಸವನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಅಜಯ್ ಕುಮಾರ್ ಸಾಥ್ ನೀಡಿದರು. ದಾವಣಗೆರೆ ಜಿಲ್ಲೆಗೆ ಪ್ರವೇಶಿಸಿದ ಪಾದಯಾತ್ರೆಯನ್ನು ಹರಿಹರದ ಜನ್ರು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡರು. ಬಳಿಕ ಹರಹರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ಹರಿಹರದ ಪಂಚಮಸಾಲಿ ಪೀಠದ ಪೀಠಾಧ್ಯಕ್ಷರಾದ ವಚನಾನಂದ ಶ್ರೀ ಗೈರಾಗಿದ್ದರು.