2ನೇ ದಿನವೂ ಮುಂದುವರೆದ ಬ್ಯಾಂಕ್ ನೌಕರರ ಸಂಘಗಳ ಪ್ರತಿಭಟನೆ - ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆ
🎬 Watch Now: Feature Video

ಹುಬ್ಬಳ್ಳಿಯಲ್ಲಿ ಬ್ಯಾಂಕ್ ನೌಕರ ಸಂಘಟನೆಗಳ ಸಂಯುಕ್ತ ವೇದಿಕೆ ವತಿಯಿಂದ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಯುನಿಯನ್ ಬ್ಯಾಂಕ್ ಎದುರು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವೇತನ ಪರಿಷ್ಕರಣೆ ಐದು ದಿನ ಬ್ಯಾಂಕಿಂಗ್ ಸೇವೆ ಜಾರಿಗೊಳಿಸುವುದು, ಪಿಂಚಣಿ ಮತ್ತು ಕುಟುಂಬ ಪಿಂಚಣಿಯಲ್ಲಿ ಸುಧಾರಣೆ, ಹೊಸ ಪಿಂಚಣಿ ರದ್ದುಗೊಳಿಸುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು. ಮುಷ್ಕರದಲ್ಲಿ ಎಐಬಿಇಒ, ಎಐಬಿಒಸಿ, ಎನ್ಸಿಬಿಇ, ಎಐಬಿಒಎ, ಬಿಇಎಫ್ಐ, ಐಎಬಿಇಎಫ್, ಐಎನ್ಸಿಓಸಿ, ಎನ್ಒಬಿಡಬ್ಲೂ, ಎನ್ಒಬಿಒ ಬ್ಯಾಂಕ್ ಸಂಘಟನೆಗಳು ಬೆಂಬಲ ಸೂಚಿಸಿದವು.