ಅಮೆರಿಕದಲ್ಲಿ ಪೊಲೀಸ್ ದೌರ್ಜನ್ಯದ ವಿರುದ್ಧ ಆಕ್ರೋಶ: ಬಲೂನ್ ಹಾರಿಸಿ ಅಗಲಿದ ಜೀವಗಳಿಗೆ ನಮನ - ಪೊಲೀಸ್ ದರ್ಪಕ್ಕೆ ಬಲಿಯಾದ ಫ್ರಾಯ್ಡ್ ಗೆ ಶ್ರದ್ಧಾಂಜಲಿ
🎬 Watch Now: Feature Video
ಮೇ 25 ರಂದು ಬಿಳಿ ಪೊಲೀಸ್ ಅಧಿಕಾರಿಯೊಬ್ಬ ಕಾನೂನು ಪಾಲನೆಯ ನೆಪದಲ್ಲಿ ತನ್ನ ಮೊಣಕಾಲನ್ನು ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪುವರ್ಣೀಯನ ಕುತ್ತಿಗೆಗೆ ಒಂಬತ್ತು ನಿಮಿಷಗಳ ಕಾಲ ಒತ್ತಿ ಹಿಡಿದು ಆತನು ಸಾಯುವಂತೆ ಮಾಡಿದ್ದ. ಪೊಲೀಸ್ ದೌರ್ಜನ್ಯಕ್ಕೆ ಜೀವತೆತ್ತ ಫ್ರಾಯ್ಡ್ ಗೆ ಶ್ರದ್ಧಾಂಜಲಿ ಸೂಚಿಸಲು ಹಾಗೂ ಅಮೆರಿಕದಲ್ಲಿ ಪೊಲೀಸ್ ದರ್ಪಕ್ಕೆ ಬಲಿಯಾದ ಜೀವಗಳ ಸ್ಮರಣಾರ್ಥ ಜನರು ಮಿನಿಯಾಪೊಲಿಸ್ ಉದ್ಯಾನವನದಲ್ಲಿ ಬಲೂನ್ಗಳನ್ನು ಆಗಸಕ್ಕೆ ಹಾರಿ ಬಿಟ್ಟರು. ಈ ಮೂಲಕ ಅಗಲಿದ ಜೀವಗಳಿಗೆ ಗೌರವ ಸೂಚಿಸಿದರು.