ಕಾಂಗ್ರೆಸ್ನವರು ಭದ್ರಾವತಿಗೆ ತೆರಳಿ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡ್ತಿದ್ದಾರೆ: ಶ್ರೀರಾಮುಲು - ಸಚಿವ ಶ್ರೀರಾಮುಲು
🎬 Watch Now: Feature Video

ಹಾಸನ: ಅಖಂಡ ಶ್ರೀನಿವಾಸ್ ಮನೆಗೆ ಸಮಾಧಾನ ಮಾಡಲು ಯಾರೂ ಹೋಗಿಲ್ಲ. ಈಗ ಭದ್ರಾವತಿಗೆ ಹೋಗಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ನಾನು ಡಿ.ಕೆ.ಶಿವಕುಮಾರ್ಗೆ ಕೇಳುತ್ತೇನೆ, ದಲಿತ ಮುಖಂಡರ ಮನೆ ಮೇಲೆ ದಾಳಿ ಆದಾಗ ಯಾಕೆ ಧರಣಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಸಿಡಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಎಸ್ಐಟಿ ತನಿಖೆ ನಡೆಯುತ್ತಿದೆ. ಕೋರ್ಟ್ ಮುಂದೆ ಹೋದ ಕಾರಣಕ್ಕೆ ತಪ್ಪಾಗಿ ಅರ್ಥೈಸಬಾರದು. ತನಿಖೆ ಬಳಿಕ ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಗೊತ್ತಾಗಲಿದೆ ಎಂದಿದ್ದಾರೆ.