ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಯ್ಯಪ್ಪ ಭಕ್ತರು! ವಿಡಿಯೋ... - Ayyappa devotees rescued suicide attempt,
🎬 Watch Now: Feature Video
ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರು ರಕ್ಷಿಸಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿಯ ನೈಸ್ ರೋಡ್ ಬಳಿ ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನೈಸ್ ರಸ್ತೆಯ ಮೇಲು ಸೇತುವೆ ಬಳಿ ವ್ಯಕ್ತಿಯೋರ್ವ ಮೇಲಿಂದ ಕೆಳಗೆ ಬೀಳಲು ಪ್ರಯತ್ನಿಸುತ್ತಿದ್ದ.. ಈ ವೇಳೆ ಶಬರಿಮಲೆಗೆ ಹೋಗಲು ಇರುಮುಡಿ ಧರಿಸಿದ್ದ ಅಯ್ಯಪ್ಪ ಭಕ್ತರು ಕಂಡಿದ್ದಾರೆ. ತೀವ್ರ ಆತಂಕದ ಧನಿಯಿಂದಲೇ ಕೆಳಗೆ ಬೀಳದಂತೆ ಹಲವು ಬಾರಿ ಮನವಿ ಮಾಡಿದ್ದಾರೆ. ಇದನ್ನು ನಿರ್ಲಕ್ಷ್ಯ ವಹಿಸಿದ ಆತ ಆತ್ನಹತ್ಮೆ ಪ್ರಯತ್ನವನ್ನು ಮುಂದುವರೆಸಿದ್ದಾನೆ. ಅಷ್ಟೊತ್ತಿಗಾಗಲೇ ಅಯ್ಯಪ್ಪ ಭಕ್ತರ ಸಾಲಿನಲ್ಲಿ ಆನಂದ್ ಹಾಗೂ ಅವರ ತಂಡ ಅವನಿರುವ ಸ್ಥಳಕ್ಕೆ ತೆರಳಿ ಆತನನ್ನು ರಕ್ಷಿಸಿದ್ದಾರೆ. ಸದ್ಯ ಆ ವ್ಯಕ್ತಿಯನ್ನು ಬ್ಯಾಟರಾಯನಪುರ ಪೊಲೀಸರಿಗೆ ಒಪ್ಪಿಸಿದ್ದು, ಆತ್ಮಹತ್ಯೆಯ ಕಾರಣ ತಿಳಿದು ಬರಬೇಕಾಗಿದೆ.
TAGGED:
ರಕ್ಷಿಸಿದ ಅಯ್ಯಪ್ಪ ಭಕ್ತರು,